1000 ಹಾಸಿಗೆಗಳ #COVID19 ಆರೈಕೆ ಆಸ್ಪತ್ರೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್ T1 ಬಳಿ ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಥಾಪಿಸಲಾಗಿದೆ – ನೈಜತೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಹರಿದಾಡುತ್ತಿದ್ದ ಚಿತ್ರವನ್ನು ಕೆಳಗೆ ಕೊಡಲಾಗಿದೆ.

ಮೇಲ್ಕಂಡ ವಿಷಯದ ಬಗ್ಗೆ ಸತ್ಯ ಸಂಗತಿಗಳು:

ಟ್ವಿಟ್ಟರ್‌ನಲ್ಲಿ ಮುಂಬೈನ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿಯವರು ಈ ವೈರಲ್ ಸಂದೇಶವನ್ನು ನಕಲಿ ಹಾಗೂ ಆಧಾರರಹಿತ ಎಂದು ಸ್ಪಷ್ಟಪಡಿಸಿರುತ್ತಾರೆ. ಅದೇ ಸಂದೇಶವು ಕರ್ನಾಟಕದಲ್ಲಿ ಪ್ರಸಾರವಾಗುತ್ತಿರುವುದನ್ನು ಸುಲಭವಾಗಿ ತಿಳಿಯಬಹುದು (ಮುಂಬೈನಿಂದ ಬೆಂಗಳೂರು ಸ್ಥಳ ಮಾತ್ರ ಬದಲಾವಣೆ ಮಾಡಿರುವುದು). ಕರ್ನಾಟಕದಲ್ಲಿ ಪ್ರಸಾರವಾದ ಸಂದೇಶವು ಈ ಕೆಳಕಂಡಂತಿದೆ -  1000 ಹಾಸಿಗೆಗಳ #COVID19 ಆರೈಕೆ ಆಸ್ಪತ್ರೆಯನ್ನು ಬೆಂಗಳೂರಿನ ವಿಮಾನ ನಿಲ್ದಾಣ ಟರ್ಮಿನಲ್ ಟಿ 1 ಬಳಿ ಭಾರತೀಯ ಸಶಸ್ತ್ರ ಪಡೆಗಳಿಂದ ಸ್ಥಾಪಿಸಲಾಗಿದೆ. ಆದ್ದರಿಂದ ಇದು ನಕಲಿ ಸಂದೇಶವಾಗಿದೆ, ಏಕೆಂದರೆ ಸಶಸ್ತ್ರ ಪಡೆಗಳು ಬೆಂಗಳೂರಿನ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಯಾವುದೇ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಿರುವುದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ನಕಲಿ ಮತ್ತು ದಾರಿತಪ್ಪಿಸುವ ಸಂದೇಶಗಳನ್ನು ಹರಡಿದ ಅಪರಾಧಿಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಜನರು ಪಡೆಯುವ ಯಾವುದೇ ನಕಲಿ ಮಾಹಿತಿಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ರವಾನಿಸುವ ಮೊದಲು ಸಂಬಂಧಪಟ್ಟ ಇಲಾಖೆ/ಅಧಿಕಾರಿಗಳಿಂದ/ಅಧಿಕೃತ ಜಾಲತಾಣಗಳಿಂದ ಸ್ಪಷ್ಟನೆ ಪಡೆದು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ.

Be the first to comment

Leave a Reply

Your email address will not be published.


*