ಅಜಾನ್ ವಿಷಯವಾಗಿ ಹುಬ್ಬಳ್ಳಿಯ ಮಸೀದಿ ಮುಂದೆ ಬೊಬ್ಬೆ ಹಾಕಲು ಬಂದ ಹಿಂದುಗಳನ್ನು ಚಡ್ಡಿ ಜಾರಿಸಿ ಓಡಿಸಿದ ಮುಸ್ಲಿಮರು ಎಂಬ ವೀಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಜಾಲ ತಾಣಗಳಾದ ಪೇಸ್ಬುಕ್, ಟ್ವಿಟ್ಟರ್ ಹಾಗೂ ವಾಟ್ಸಪ್ಗಳಲ್ಲಿ ಕಿಡಿಗೇಡಿಗಳು ಕರ್ನಾಟಕದಲ್ಲಿ ಕಂಡುಬಂದಿದ್ದು, ಆದರೆ ಇದು ಸತ್ಯಕ್ಕೆ ದೂರವಾದುದು.
ವಿಡಿಯೋ ಸ್ಕ್ರೀನ್ ಶಾಟ್ ಗಳನ್ನು ಈ ಕೆಳಗೆ ನೀಡಲಾಗಿದೆ

ಕರ್ನಾಟಕ ರಾಜ್ಯ ಪೊಲೀಸ್ ಫ್ಯಾಕ್ಟ್ ಚೆಕ್ ತಂಡವು ಈ ಕುರಿತು ಪರಿಶೀಲಿಸಿದ್ದು ನಿಜವಾದ ಸಂಗತಿಗಳನ್ನು ಈ ಕೆಳಗೆ ನೀಡಲಾಗಿದೆ.
ಈ ಬಗ್ಗೆ ಪರಿಶೀಲಿಸಿದಾಗ, ಮೇಲ್ಕಂಡ ಪೊಸ್ಟ್ ಹಾಗೂ ವಿಡಿಯೋ ಕರ್ನಾಟಕದ್ದಲ್ಲ ಎಂದು ತಿಳಿದುಬಂದಿದೆ. ಈ ವೀಡಿಯೊ ಬಾಂಗ್ಲದೇಶದಲ್ಲಿ ಪ್ರತಿಭಟನೆ ನಡೆಸಿದ ಸಮಯದಲ್ಲಿ ಚಿತ್ರೀಕರಿಸಲಾಗಿರುವುದಾಗಿದೆ ಎಂಬುದು ಪರಿಶೀಲಿಸಿದಾಗ ತಿಳಿದುಬಂದಿರುತ್ತದೆ. ಹುಬ್ಬಳ್ಳಿಯಲ್ಲಿ ಹಾಗು ಕರ್ನಾಟಕದಲ್ಲಿ ಈ ತರಹದ ಯಾವುದೇ ಘಟನೆ ನಡೆದಿರುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆ ವಿಡಿಯೋ ಕರ್ನಾಟಕಕ್ಕೆ ಸಂಭಂದಿಸಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬಂದಿರುತ್ತದೆ.
ತೀರ್ಮಾನ:
ಈ ವಿಡಿಯೋ ಅಜಾನ್ ಗೆ ಸಂಬಂಧಿಸಿದ ಪ್ರಸ್ತುತ ವಿವಾದಗಳಿಗೆ ಸಂಭಂಧಿಸಿದ್ದಾಗಿರುವುದಿಲ್ಲ. ಇದು ಯಾರೋ ಕಿಡಿಗೇಡಿಗಳು ದುರುದ್ದೇಶಪೂರ್ವಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಾಸ್ತವ ವಿಷಯಗಳನ್ನು ತಿರುಚಿ ಹಂಚಿಕೊಳ್ಳಲಾಗುತ್ತಿರುವುದಾಗಿದೆ.
ಗುಂಪುಗಳ ನಡುವೆ ದ್ವೇಷಕ್ಕೆ ಕಾರಣವಾಗುವ ಇಂತಹ ಪರಿಶೀಲನೆಗೊಳಪಡಿಸದ / ಅನುಮಾನಾಸ್ಪದ ಮಾಹಿತಿಗೆ ಬಲಿಯಾಗದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವಿಷಯಗಳನ್ನು ಹಂಚಿಕೊಳ್ಳಬಾರದೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ
Leave a Reply