ಬೆಂಗಳೂರಿನ ಗೋರಿಪಾಳ್ಯದಲ್ಲಿ ಮುಸ್ಲಿಂ ಹುಡುಗರ ಅತಿರೇಖ ಹಾಗೂ ಮುಸ್ಲಿಂ ಏರಿಯಾಗೆ ಬಂದು ಉರ್ದು ಮಾತಾಡಿಲ್ಲ ಅಂತಾ ಕೊಂದ ಕಿರಾತಕರು ಎಂಬ ಶೀರ್ಶಿಕೆ ಅಡಿಯಲ್ಲಿ ಕಸ್ತೂರಿ ನ್ಯೂಸ್ ೨೪ ನ ವಿಡೀಯೋವನ್ನು ಪ್ರತಿನಿಧಿಸುವಂತೆ ವಿಡಿಯೋ ಕ್ಲಿಪ್ ಒಂದನ್ನು ಸಾಮಾಜಿಕ ಜಾಲ ತಾಣಗಳಾದ ಪೇಸ್ಬುಕ್, ಟ್ವಿಟ್ಟರ್ ಹಾಗೂ ವಾಟ್ಸಪ್ಗಳಲ್ಲಿ ಕಿಡಿಗೇಡಿಗಳು ಹರಿಬಿಟ್ಟಿರುವುದನ್ನು ಗಮನಿಸಲಾಗಿದೆ. ಆದರೆ ಇದು ಸತ್ಯಕ್ಕೆ ದೂರವಾದುದು.
ವಿಡಿಯೋ ಸ್ಕ್ರೀನ್ ಶಾಟ್ ಗಳನ್ನು ಈ ಕೆಳಗೆ ನೀಡಲಾಗಿದೆ




ವಕೀಲರೆಂದು ಹೇಳುವ ಮೀರಾ ರಾಘವೇಂದ್ರ ಎಂಬುವವರ ಫೋಟೋ ಉಳ್ಳ ಈ ಕೆಳಗಿನ ಫೋಟೋವನ್ನು ಕೆಲವರು ಶೇರ್ ಮಾಡುತ್ತಿರುವುದನ್ನು ಗಮನಿಸಲಾಗಿದೆ.

ಈ ಕುರಿತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ರವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ಸ್ಪಷ್ಟೀಕರಣ ನೀಡಿದ್ದು ಅದನ್ನು ಈ ಕೆಳಗೆ ನೀಡಲಾಗಿದೆ


ತೀರ್ಮಾನ:
ಸತ್ಯಾಸತ್ಯತೆ ಪರಿಶೀಲಿಸಲಾಗಿ, ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಸುದ್ದಿಯಾಗಿದ್ದು ಸಾಮಾಜಿಕ ಸ್ವಾಸ್ಥ್ಯ ಕೆಡಿಸಲು ಉದ್ದೇಶಪೂರ್ವಕವಾಗಿ ಈ ಮೇಲಿನಂತೆ ಸುಳ್ಳು ಸುದ್ದಿ ಹರಡುವವರ ವಿರುದ್ದ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡುತ್ತಾ ಸಾರ್ವಜನಿಕರು ಸರಿಯಾಗಿ ಪರಿಶೀಲಿಸದೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಬಾರದೆಂದು ಈ ಮೂಲಕ ಕೋರಲಾಗಿದೆ.
ಆದ್ದರಿಂದ ಪೊಲೀಸ್ ಇಲಾಖೆ ಮತ್ತು ಇತರ ಮತೀಯ ಭಾವನೆಯನ್ನು ಕೆರಳುವಂತಹ ಧಾರ್ಮಿಕ ಸೂಕ್ಷ್ಮತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸೂಕ್ತ ಪ್ರಾಧಿಕಾರಗಳಿಂದ ಯಾವುದೇ ರೀತಿಯ ದೃಡೀಕರಿಸದ ವೀಡಿಯೊಗಳನ್ನು ಪೋಟೋಗಳನ್ನು ಹಾಗೂ ಬರಹಗಳನ್ನು ಸರಿಯಾದ ಪರಿಶೀಲನೆ ಇಲ್ಲದೆ ಹಂಚಿಕೊಳ್ಳದಂತೆ ಕೋರಲಾಗಿದೆ.
Leave a Reply