ಮಸೀದಿಗಳಲ್ಲಿ ಈದ್ ಪ್ರಾರ್ಥನೆಗಳಿಗೆ ಸರ್ಕಾರ ಅನುಮತಿಸಿದೆ ಎಂದು ಹೇಳಿರುವ ಟಿವಿ ನ್ಯೂಸ್‌ ತುಣುಕುಗಳ ಬಗ್ಗೆ: ನಿಜ ಸಂಗತಿಗಳು

ಕರ್ನಾಟಕದಲ್ಲಿ ಪ್ರಸ್ತುತ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಿ ಮಸೀದಿಗಳಲ್ಲಿ ರಂಜಾನ್ ಆಚರಣೆಗೆ ಪ್ರಾರ್ಥನೆಗೆ ಸರ್ಕಾರ ಅನುಮತಿ ನೀಡಿದೆ ಎಂಬ ಹೇಳಿಕೆಯೊಂದಿಗೆ ಟಿವಿ 9 ಮತ್ತು ಪಬ್ಲಿಕ್ ಟಿವಿ ಸುದ್ದಿ ವಾಹಿನಿಗಳ ಎರಡು ವಿಡಿಯೋ ತುಣುಕುಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿರುವುದನ್ನು ಗಮನಿಸಲಾಗಿದೆ.

ಟಿವಿ 9 ತುಣುಕಿನ ಸ್ಕ್ರೀನ್ ಶಾಟ್‌ಗಳು

ಪಬ್ಲಿಕ್ ಟಿವಿ ತುಣುಕಿನ ಸ್ಕ್ರೀನ್ ಶಾಟ್‌ಗಳು

ಪರಿಶೀಲಿಸಲಾಗಿ, ಈ ಎರಡೂ ವೀಡಿಯೊ ತುಣುಕುಗಳು ಹಳೆಯವು ಎಂದು ಮತ್ತು ಪ್ರಸ್ತುತ ಲಾಕ್‌ಡೌನ್‌ಗೆ ಸಂಬಂಧಿಸಿಲ್ಲ ಎಂದು ಕಂಡುಬಂದಿದೆ. ಕೆಲವು ದುಷ್ಕರ್ಮಿಗಳು ಹಳೆಯ ವೀಡಿಯೊಗಳನ್ನು ಅಂತರ್ಜಾಲದಲ್ಲಿ ಡೌನ್‌ಲೋಡ್ ಮಾಡಿದ್ದಾರೆ ಮತ್ತು ಜಾಣತನದಿಂದ ಟೈಮ್‌ಸ್ಟ್ಯಾಂಪ್ ಅನ್ನು ಮರೆಮಾಚಿ ಈಗ ಅವುಗಳನ್ನು ವಾಟ್ಸಾಪ್‌ನಲ್ಲಿ ಪ್ರಸಾರ ಮಾಡುತ್ತಿದ್ದಾರೆ. ಇದು ಪ್ರಸ್ತುತ ರಂಜಾನ್ ಆಚರಣೆಯಲ್ಲಿ (14/05/021 ರಂದು) ನಮಾಜ್‌ಗೆ ಅನುಮತಿ ನೀಡಲಾಗಿದೆ ಎಂಬ ಅಭಿಪ್ರಾಯವನ್ನು ಮೂಡಿಸುವಂತಿದೆ.

ರಂಜಾನ್ -2021 ರ ಪ್ರಾರ್ಥನೆಯ ಬಗ್ಗೆ ಟಿವಿ-9 ಸುದ್ದಿವಾಹಿನಿಯ ಪ್ರಸ್ತುತ ವಿಡಿಯೋ ತುಣುಕನ್ನು ಈ ಲಿಂಕ್ ಮೂಲಕ ನೋಡಬಹುದಾಗಿದೆ.
ಮನೆಯಲ್ಲಿಯೇ ಪ್ರಾರ್ಥನೆ ಮಾಡಿ | Maqsood Imran Rashadi And Shafi On Ramadan Celebration In Karnataka

Link:https://youtu.be/K_K9psy5ZvU

ಪ್ರಸ್ತುತ ಲಾಕ್‌ಡೌನ್‌ನಲ್ಲಿ ಬೆಂಗಳೂರು ನಗರ ಪೊಲೀಸರು ಟ್ವಿಟರ್‌ನಲ್ಲಿ ರಂಜಾನ್ ಪ್ರಾರ್ಥನೆಯ ಬಗ್ಗೆ ತಿಳಿಸಿರುತ್ತಾರೆ.


Tweet Link:-https://twitter.com/CPBlr/status/1392829058744868866

ತೀರ್ಮಾನ:
ವಾಸ್ತವ ಪರಿಶೀಲಿಸಲಾಗಿ, ಪ್ರಸಾರವಾಗುತ್ತಿರುವ ವಿಡಿಯೊಗಳು ಪ್ರಸ್ತುತ 2021 ರಂಜಾನ್‌ಗೆ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ. ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿಯ ವಿನಾಯಿತಿ ಮತ್ತು ಅನುಮತಿಯನ್ನು ನೀಡಿರುವುದಿಲ್ಲ. ಜನರು ತಮ್ಮ ಮನೆಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮತ್ತು ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ಆದ್ದರಿಂದ ಕರೋನಾ ಮತ್ತು ಪೊಲೀಸ್ ಇಲಾಖೆ ಮತ್ತು ಇತರ ಲಾಕ್‌ಡೌನ್ ಮಾರ್ಗಸೂಚಿಗಳು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ದೃಡೀಕರಿಸದ ವೀಡಿಯೊಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಿಯಾದ ಪರಿಶೀಲನೆ ಇಲ್ಲದೆ ಹಂಚಿಕೊಳ್ಳದಂತೆ ಕೋರಲಾಗಿದೆ.

Be the first to comment

Leave a Reply

Your email address will not be published.


*