ಮಂಗಳೂರಿನಲ್ಲಿ ಹಕ್ಕಿ ಜ್ವರದ ಭೀತಿ

ಜನವರಿ ೫ರಂದು, ಮಂಗಳೂರು ತಾಲ್ಲೂಕಿನ ಮಂಜನಾಡಿ ಗ್ರಾಮದ ಬಳಿ ನಿಗೂಢ ರೀತಿಯಲ್ಲಿ ಆರು ಕಾಗೆಗಳು ಸತ್ತು ಬಿದ್ದಿದ್ದನ್ನು ಮಾಧ್ಯಮಗಳು ಬಹಳ ಪ್ರಚಾರ ಮಾಡಿವೆ. ಈ ಸುದ್ದಿಪ್ರಚಾರದಿಂದ ಜನಸಾಮಾನ್ಯರ ಮನಸ್ಸಿನಲ್ಲಿ ಆತಂಕ ಮೂಡಿದೆ.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಲೆಕ್ಕಿಗರನ್ನು ಒಳಗೊಂಡಂತೆ ಹಿಂದಿನ

ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಶುವೈದ್ಯರು ಮತ್ತು ಸಹಾಯಕ ಆಯುಕ್ತರವರಿಗೆ ಮಾಹಿತಿ ನೀಡಿರುತ್ತಾರೆ.
ಅದರಂತೆ, ಸ್ಯಾಂಪಲ್‌ಗಳನ್ನು ಸಂಗ್ರಹಿಸಿ Institute of Animal Health ಹೆಬ್ಬಾಳ, ಬೆಂಗಳೂರಿಗೆ ಕಾಗೆಗಳ ಮರಣದ ಅಸಲಿ ಕಾರಣ ತಿಳಿಯಲು ಕಳುಹಿಸಲಾಯಿತು.
ಪ್ರಯೋಗಾಲಯದ ವರದಿಯು ಬಂದಿದ್ದು, ಸತ್ತ ಯಾವ ಕಾಗೆಯೂ ಹಕ್ಕಿ ಜ್ವರ (Avian Influenza) ದಿಂದ ಮರಣಿಸಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ರಾಜ್ಯ ಆರೋಗ್ಯ ಸಚಿವರು ಈ ವಿಷಯದಲ್ಲಿ ಸಾರ್ವಜನಿಕರು ಆತಂಕಗೊಳ್ಳಬಾರದೆAದು ಕೋರಿದ್ದಾರೆ ಹಾಗೂ ಸಾರ್ವಜನಿಕರು ಮಾಂಸಾಹಾರವನ್ನು ಸೇವಿಸುವ ಮೊದಲು ಅದನ್ನು ಸರಿಯಾಗಿ ಬೇಯಿಸುವಂತೆ ಹಾಗೂ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.

https://twitter.com/ANI/status/1348216131102724096

Be the first to comment

Leave a Reply

Your email address will not be published.


*