ಬೆಂಗಳೂರಿನ ಪೀಪಲ್ ಟ್ರೀ ಆಸ್ಪತ್ರೆ ಮೇಲೆ ದಾಳಿಯ ಬಗ್ಗೆ: ನಿಜವಾದ ಸಂಗತಿಗಳು.

ಆಸ್ಪತ್ರೆಯ ಕಾರಿಡಾರ್‌ಗಳಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ಮೇಲೆ ಹಲ್ಲೆ ಮತ್ತು ನೆಲದ ಮೇಲೆ ರಕ್ತದ ಕಲೆಗಳನ್ನು ತೋರಿಸುವ ಆಸ್ಪತ್ರೆಯ ವಿಡಿಯೋ ತುಣುಕನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಈ ಘಟನೆ ಬೆಂಗಳೂರು ನಗರದ ಯಶ್ವಂತಪುರ ಪೀಪಲ್‌ಟ್ರೀ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ವೀಡಿಯೊಗಳ ಸ್ಕ್ರೀನ್ ಶಾಟ್‌ಗಳು ಇಲ್ಲಿವೆ:

ಈ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವ ಜನರು ಈ ರೀತಿಯ ಕಾಮೆಂಟ್‌ಗಳನ್ನು ಫಾರ್ವರ್ಡ್ ಮಾಡುವುದನ್ನು ಸಹ ಗಮನಿಸಬಹುದಾಗಿದೆ:

  1. ಆಸ್ಪತ್ರೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಪೊಲೀಸ್ ಸಂರಕ್ಷಣೆ ನಮ್ಮ ತುರ್ತು ಅಗತ್ಯವಾಗಿದೆ
    ಹಾಸಿಗೆಗಳು ಲಭ್ಯವಾಗದಿರುವುದಕ್ಕೆ ಹತಾಶರಾಗಿರುವ ಜನರರು ಮತ್ತು ಆಸ್ಪತ್ರೆಗಳಲ್ಲಿ ಪರಿಸ್ಥಿತಿ ಹದಗೆಟ್ಟರೆ ಹಲ್ಲೆ, ಕಳ್ಳತನ ಮತ್ತು ಗಲಭೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಮತ್ತು ಸೀಮಿತ ಸಂಪನ್ಮೂಲಗಳೊಂದಿಗೆ ಅಧಿಕ ಅವಧಿಯಲ್ಲಿ ಕೆಲಸ ಮಾಡಿದರೂ ಆಸ್ಪತ್ರೆಗಳು ಆಕ್ರಮಣಗಳಿಗೆ ಒಳಗಾಗುವ ಸಾಧ್ಯತೆಯಿದೆ. ಆಸ್ಪತ್ರೆಯ ಸಿಬ್ಬಂದಿ ಮತ್ತು ಆರೋಗ್ಯ ಕಾರ್ಯಕರ್ತರು ಬೆದರಿಕೆ ಮತ್ತು ನಿರಾಶೆ ಅನುಭವಿಸಿದರೆ ಮತ್ತು ಅವರಿಗೆ ಅಗತ್ಯವಾದ ರಕ್ಷಣೆ ಸಿಗದಿದ್ದರೆ, ಇಡೀ ವ್ಯವಸ್ಥೆಯು ಕುಸಿಯುತ್ತದೆ.
  2. ಮಾಧ್ಯಮ ಮತ್ತು ಮಾಫಿಯಾ ಎರಡನ್ನೂ ನಾವು ಗಂಭೀರವಾಗಿ ನೋಡುವ ಸಮಯ ಬಂದಿದೆ.
    ಸತ್ಯವನ್ನು ಕಂಡುಹಿಡಿಯದೆ ಮಾಧ್ಯಮಗಳು ಇಂತಹ ಮಾಹಿತಿಯನ್ನು ಹೇಗೆ ಪ್ರಸಾರ ಮಾಡುತ್ತಿವೆ? ಇವೆರಡರ ವಿರುದ್ಧ ನಾವು ಎಫ್‌ಐಆರ್ ದಾಖಲಿಸಬೇಕು ಎಂದು ನಾನು ಭಾವಿಸುತ್ತೇನೆ. ಯಾವುದೇ ಆಸ್ಪತ್ರೆಗಳ ಮೇಲೆ ಧಾಳಿ ನಡೆದರೆ ಕೆಲಸ ಮಾಡುವುದನ್ನು ಕೂಡಲೇ ನಿಲ್ಲಿಸುತ್ತೇವೆ ಎಂದು Private Hospitals and Nursing Homes association ಘೋಷಿಸಬೇಕು.
    ಕೋವಿಡ್ ಮತ್ತು ಇಂತಹ ದೊಂಬಿಗಳಿಂದ ನಾವು ಏಕೆ ಕಷ್ಟ ಅನುಭವಿಸಬೇಕು?‌ ಎಂದು ಜನರೇ್ ನಿರ್ಧರಿಸಲಿ.

ಆದಾಗ್ಯೂ ವೀಡಿಯೊದ ಬಗ್ಗೆ ನಿಜವಾದ ಸಂಗತಿಗಳು ಹೀಗಿವೆ:
1. ಈ ಘಟನೆಯು ಪೀಪಲ್‌ಟ್ರೀ ಆಸ್ಪತ್ರೆ ಯಶವಂತಪುರ, ಬೆಂಗಳೂರು ನಗರಕ್ಕೆ ಸಂಭಂದಿಸಿರುವುದಿಲ್ಲ.

2. ದೆಹಲಿಯ ಸರಿತಾ ವಿಹಾರದ ಅಪೊಲೊ ಆಸ್ಪತ್ರೆಯಲ್ಲಿ ಈ ಘಟನೆ ವರದಿಯಾಗಿದೆ, ಅಲ್ಲಿ ಕೋವಿಡ್ ರೋಗಿಗೆ ಐಸಿಯು ಹಾಸಿಗೆ ಲಭ್ಯವಾಗದ ಕಾರಣ, ರೋಗಿಯು ನಿಧನರಾದರು ಎಂದು ಆಕ್ರೋಶಗೊಂಡ ರೋಗಿಯ ಸಂಬಂಧಿಕರಿಂದ ಆಸ್ಪತ್ರೆಯ ಸಿಬ್ಬಂದಿ ಮತ್ತು ವೈದ್ಯರ ಮೇಲೆ ಹಲ್ಲೆ ನಡೆದಿದೆ. ಈ ಸುದ್ದಿ ಈಗಾಗಲೇ ದಿ ಹಿಂದೂ ನ್ಯೂಸ್ ಪೋರ್ಟಲ್‌ನಲ್ಲಿ ಪ್ರಕಟವಾಗಿದೆ.
https://www.thehindu.com/news/cities/Delhi/healthcare-workers-at-delhis-apollo-hospital-injured-after-attack-by-relatives-of-covid-19-patient/article34423060.ece?homepage=true&utm_campaign=socialflow
3.ಇದಲ್ಲದೆ, ಬೆಂಗಳೂರು ನಗರದಲ್ಲಿ ಈ ಘಟನೆ ನಡೆದಿರುವುದಿಲ್ಲ ಎಂದು ಬೆಂಗಳೂರು ನಗರ ಪೊಲೀಸರು ಈಗಾಗಲೇ ಟ್ವೀಟ್ ಮಾಡಿರುತ್ತಾರೆ.

ಆದ್ದರಿಂದ, ಈ ಘಟನೆಯು ಬೆಂಗಳೂರು ನಗರದ ಯಶವಂತಪುರ ಪೀಪಲ್‌ಟ್ರೀ ಆಸ್ಪತ್ರೆಯೊಂದಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ. ಆದರೂ, ಕೆಲವು ದುಷ್ಕರ್ಮಿಗಳು ಈ ವೀಡಿಯೊಗಳನ್ನು ಅನಗತ್ಯವಾಗಿ ಸುಳ್ಳು ನಿರೂಪಣೆಯೊಂದಿಗೆ ಪ್ರಸಾರ ಮಾಡುವ ಮೂಲಕ ತಪ್ಪು ಮಾಹಿತಿ ಹರಡಿ ಸಾರ್ವಜನಿಕರ ಮನದಲ್ಲಿ ಆತಂಕ ಮತ್ತು ಸಂಶಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.

ಈ ಘಟನೆಯ ಬಗ್ಗೆ ಪೊಲೀಸರು ಈಗಾಗಲೇ ತನಿಖೆ ನಡೆಸುತ್ತಿದ್ದಾರೆ ಮತ್ತು ಅಪರಾಧಿಗಳನ್ನು ಗುರುತಿಸಿ ಸೂಕ್ತಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ, ಜನರು ವಿವಿಧ ಸಾಮಾಜಿಕ ಮಾಧ್ಯಮಗಳು ಮತ್ತು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ವೀಕರಿಸುವ ಇಂತಹ ಯಾವುದೇ ನಂಬಿಕೆಗೆ ಅರ್ಹವಲ್ಲದ ಸುದ್ದಿಗಳನ್ನು ರವಾನಿಸುವ ಮೊದಲು ಸೂಕ್ತ ಪ್ರಾಧಿಕಾರಗಳೊಂದಿಗೆ ಸ್ಪಷ್ಟನೆ ಪಡೆದುಕೊಳ್ಳಲು ಕೋರಲಾಗಿದೆ.

Be the first to comment

Leave a Reply

Your email address will not be published.


*