ಫ್ಲೈಓವರ್ನ ಕೆಳಗೆ ಮೂವರು ಸೇರಿ ಒಬ್ಬ ವ್ಯಕ್ತಿಯನ್ನು ತಲೆಯ ಮೇಲೆ ಹೊಡೆದು ಕೊಲ್ಲುವ ದೃಶ್ಯದ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತಿದ್ದು. ಈ ಘಟನೆ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕೆಳಗೆ ನಡೆದಿದೆ ಎಂದು ಸುಳ್ಳು ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.
ಸದರಿ ವಿಡಿಯೋವನ್ನು ಪರಿಶೀಲಿಸಿದಾಗ ತಿಳಿದುಬಂದ ವಿವರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ವಿಡಿಯೋದ ಸ್ಕ್ರೀನ್ ಶಾಟ್ ಗಳನ್ನು ಈ ಕೆಳಗೆ ನೀಡಲಾಗಿದೆ
- ಈ ವಿಡಿಯೊದಲ್ಲಿ ಕಂಡುಬರುವ ಸೇತುವೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಸೇತುವೆಯಾಗಿರುವುದಿಲ್ಲ ಹಾಗೂ ವೀಡಿಯೊದಲ್ಲಿ ಕಾಣುವ ವಾಹನಗಳು ಮತ್ತು ಅವುಗಳ ನೋಂದಣಿ ಸಂಖ್ಯೆ ಫಲಕಗಳಿಂದ ಇದು ಸ್ಪಷ್ಟವಾಗಿ ತಿಳಿದುಬರುತ್ತದೆ.
ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನ ನಿಜವಾದ ಚಿತ್ರಗಳು ಈ ಕೆಳಗೆ ಪ್ರಕಟಿಸಲಾಗಿದೆ.
ವಿಡಿಯೋದಲ್ಲಿನ ಫ್ಲೈಓವರ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಡುವಿನ ವ್ಯತ್ಯಾಸಗಳು
- ಕಂಬಗಳು, ಎತ್ತರ ಮತ್ತು ಅಗಲದಲ್ಲಿ ಭಿನ್ನವಾಗಿವೆ.
- ಎಲೆಕ್ಟ್ರಾನಿಕ್ ಸಿಟಿಯಲ್ಲಿ ಎರಡು ಫ್ಲೈಓವರ್ಗಳಿವೆ. ಒಂದು ನಿಯಮಿತ ವಾಹನ ಸಂಚಾರಕ್ಕಾಗಿ ಮತ್ತು ಇನ್ನೊಂದು ಮೆಟ್ರೋ ರೈಲು ಸಂಚಾರಕ್ಕಾಗಿ ಬಳಸಲಾಗುತ್ತಿದೆ.
- ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಸ್ತಂಭಗಳ ಮೇಲೆ ಬಣ್ಣ ಮತ್ತು ತ್ರಿಕೋನ ಆಕಾರಗಳಿಂದ ಚಿತ್ರಿಸಲಾಗಿದೆ.
- ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬ್ರಿಡ್ಜ್ನ ಅಡಿಯಲ್ಲಿ ಸ್ಟೀಲ್ ಗ್ರಿಲ್ಗಳನ್ನು ಅಳವಡಿಸಲಾಗಿದೆ.
ಹೆಚ್ಚಿನ ಪರಿಶೀಲನೆಯಲ್ಲಿ, ಈ ಘಟನೆಯು ದಿನಾಂಕ 11 ಜನವರಿ 2021ರಂದು ತೆಲಂಗಾಣ ರಾಜ್ಯದ ಸೈಬರಾಬಾದ್ ಮೆಟ್ರೋಪಾಲಿಟನ್ ಪೊಲೀಸನವರ ಅಡಿ ಬರುವ ರಾಜೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಆದ್ದರಿಂದ ಈ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ ಎಂಬ ಸುದ್ದಿ ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿದೆ.
Leave a Reply