ಫ್ಯಾಕ್ಟ್ ಚೆಕ್: ರಿಲಯನ್ಸ್‌ ರಿಟೈಲ್‌ ಲಿಮಿಟೆಡ್‌ ಕಂಪನಿಯವರು ಸಿಂಧನೂರು ತಾಲ್ಲೂಕಿನ ರೈತರೊಂದಿಗೆ ೧೦೦೦ ಕ್ವಿಂಟಾಲ್‌ ಭತ್ತದ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿರುವ ಕುರಿತು.‌

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಕೆಳಕಂಡ ಚಿತ್ರದಲ್ಲಿರುವ ಮಾಹಿತಿಯ ಸತ್ಯಾಸತ್ಯೆತೆಯ ಬಗ್ಗೆ ಪರಿಶೀಲಿಸಲು ಕರ್ನಾಟಕ ರಾಜ್ಯ ಪೊಲೀಸ್‌ ಫ್ಯಾಕ್ಟ್‌ ಚೆಕ್‌ ಪೋರ್ಟಲ್‌ ನಲ್ಲಿ ಹಲವಾರು ಮನವಿಗಳನ್ನು ಸ್ವೀಕರಿಸಲಾಗಿದೆ. (ಚಿತ್ರ ಈ ಕೆಳ ಕಂಡಂತೆ ಇದೆ)

ಪರಿಶೀಲಿಸಲಾಗಿ, ಕೆಳಕಂಡ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಸ್ವಾಸ್ಥ್ಯ ಫಾರ್ಮರ್ಸ್‌ ಪ್ರೊಡ್ಯೂಸರ್‌ ಕಂಪನಿ ಲಿಮಿಟೆಡ್‌ ಸಂಸ್ಥೆಯ (ಸುಮಾರು ೧೧೦೦ ರೈತರನ್ನು ಒಳಗೊಂಡಿದೆ) ರೈತರಿಂದ ಒಂದು ಸಾವಿರ ಕ್ವಿಂಟಾಲ್‌ ಸೋನಾ ಮಸೂರಿ ಭತ್ತವನ್ನು ಸದ್ಯಕ್ಕೆ ಇರುವ ಬೆಂಬಲ ಬೆಲೆ ರೂ.1850 ಗಳಿಗಿಂತ ಹೆಚ್ಚಿನ ದರದಲ್ಲಿ ಅಂದರೆ 1950 ರೂ ಪ್ರತಿ ಕ್ವಿಂಟಾಲ್‌ಗೆ ಪಾವತಿಸಿ ರಿಲಯನ್ಸ್‌ ರಿಟೈಲ್‌ ಲಿಮಿಟೆಡ್‌ ಕಂಪನಿರವರು ರವರು ಖರೀದಿಸಿರುತ್ತಾರೆ.

ರಿಲಯನ್ಸ್‌ ರಿಟೈಲ್‌ ಲಿಮಿಟೆಡ್‌ ಕಂಪನಿ ರವರು ಒಟ್ಟು 1000 ಕ್ಚಿಂಟಾಲ್‌ ಭತ್ತವನ್ನು ಪ್ರತಿ ಕ್ವಿಂಟಾಲ್‌ಗೆ 1950 ರೂ ನಂತೆ ಖರೀದಿಸಿ ಒಟ್ಟು 19,50,000/- ರೂಗಳನ್ನು ಸ್ವಾಸ್ಥ್ಯ ಫಾರ್ಮರ್ಸ್‌ ಪ್ರೊಡ್ಯೂಸರ್‌ ಕಂಪನಿಯ ಬ್ಯಾಂಕ್‌ ಖಾತೆಗೆ ವರ್ಗಾಯಿಸಿರುತ್ತಾರೆ. ಖರೀದಿ ಪತ್ರದ ಪ್ರತಿಯನ್ನು ಮಾಹಿತಿಗಾಗಿ ಹಾಕಲಾಗಿದೆ.

ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿನ ಮಾಹಿತಿಯು ಸತ್ಯವಾಗಿರುತ್ತದೆ.

Be the first to comment

Leave a Reply

Your email address will not be published.


*