ಪೊಲೀಸರ ಲಾಠಿಗೆ ಜೀವವೊಂದು ಶಿರಾಳಕೊಪ್ಪದಲ್ಲಿ ಬಲಿಯಾಗಿದೆ ಎನ್ನಲಾದ ಟಿವಿ ನ್ಯೂಸ್ ಕ್ಲಿಪಿಂಗ್ ಬಗ್ಗೆ: ಸತ್ಯ ಸಂಗತಿಗಳು

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ಕರ್ನಾಟಕದಲ್ಲಿ ಲಾಕ್‌ಡೌನ್ ಜಾರಿಗೊಳಿಸುವಾಗ 10/05/2021ರಂದು ಪೊಲೀಸ್‌ ಲಾಠಿ ಚಾರ್ಜ್‌ನಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬುದಾಗಿ ಬಿಟಿವಿ ನ್ಯೂಸ್ ಚಾನೆಲ್‌ನ ವೀಡಿಯೊ ಕ್ಲಿಪ್ ಒಂದು ವಿವಿಧ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಚಾರವಾಗುತ್ತಿದೆ.

ವೀಡಿಯೊದ ಸ್ಕ್ರೀನ್ ಶಾಟ್‌ಗಳು

ಪರಿಶೀಲಸಿದಾಗ, ಕಳೆದ ವರ್ಷ ಮಾರ್ಚ್ 2020ರಲ್ಲಿ ಬಿಟಿವಿ ಪ್ರಸಾರ ಮಾಡಿದ ಹಳೆಯ ವೀಡಿಯೊ ಕ್ಲಿಪ್ ಇದಾಗಿದೆ ಎಂದು ತಿಳಿದುಬಂದಿದೆ. ಕೆಲವು ದುಷ್ಕರ್ಮಿಗಳು ಈ ಹಳೆಯ ವೀಡಿಯೊವನ್ನು ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಂಡು, ಇತ್ತೀಚಿಗೆ ನಡೆದ ಘಟನೆ ಎಂದು ಆರೋಪಿಸಿ ಪ್ರಚಾರ ಮಾಡಿರುತ್ತಾರೆ.

ಕಳೆದ ವರ್ಷ ನಡೆದ ಈ ಘಟನೆಯ ವೀಡಿಯೊದಲ್ಲಿ ತೋರಿಸಿದ್ದ ವ್ಯಕ್ತಿಯ ಮರಣವೂ ಸಹಾ ಪೊಲೀಸ್ ಲಾಠಿ ಚಾರ್ಜ್‌ನಿಂದಾಗಿ ಆಗಿದ್ದು ಅಲ್ಲ, ಅವರ ಮರಣವು ನೈಸರ್ಗಿಕ ಕಾರಣಗಳಿಂದ ಆಗಿತ್ತೆಂದು ಶಿವಮೊಗ್ಗ ಪೊಲೀಸರು ಖಚಿತಪಡಿಸಿರುತ್ತಾರೆ.

ಬಿಟಿವಿಯೂ ಸಹಾ ತಮ್ಮ ಫೇಸ್‌ಬುಕ್ ಪುಟದಲ್ಲಿ ಸ್ಪಷ್ಟೀಕರಣವನ್ನುನೀಡಿದ್ದು, ಈ ಕ್ಲಿಪ್ಪಿಂಗ್ ಕಳೆದ ವರ್ಷ ಪ್ರಸಾರವಾದ ಹಳೆಯ ಸುದ್ದಿ ಆಗಿದೆ ಮತ್ತು ಇದು ಪ್ರಸ್ತುತ ಲಾಕ್‌ಡೌನ್‌ಗೆ ಸಂಬಂಧಿಸಿಲ್ಲ ಎಂದಿದೆ.

Link:- https://fb.watch/5p1H6d-zeq/

ತೀರ್ಮಾನ:
ವಾಸ್ತವವಾಗಿ ಪರಿಶೀಲಿಸಿದಾಗ, ಪ್ರಸಾರವಾಗುತ್ತಿರುವ ವೀಡಿಯೊ ಪ್ರಸ್ತುತ ಲಾಕ್‌ಡೌನ್‌ಗೆ ಸಂಬಂಧಿಸಿಲ್ಲ. ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಪೊಲೀಸ್ ಲಾಠಿಚಾರ್ಜ್‌ನಲ್ಲಿ ಇಂತಹ ಯಾವುದೇ ಘಟನೆ ಅಥವಾ ಸಾವು ಸಂಭವಿಸಿಲ್ಲ.

ಆದ್ದರಿಂದ ಕರೋನಾ ಮತ್ತು ಪೊಲೀಸ್ ಇಲಾಖೆ ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ದೃಡೀಕರಿಸದ ಅನಧಿಕೃತ ವೀಡಿಯೊಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಿಯಾಗಿ ಪರಿಶೀಲಿಸದೆ ಸಾರ್ವಜನಿಕರು ಹಂಚಿಕೊಳ್ಳದಂತೆ ಈ ಮೂಲಕ ಕೋರಲಾಗಿದೆ.

Be the first to comment

Leave a Reply

Your email address will not be published.


*