ಚೀನಾದಿಂದ ಕಳುಹಿಸಲಾಗಿರುವ ಬಿತ್ತನೆ ಬೀಜದ ಪ್ಯಾಕೆಟ್ಗಳಲ್ಲಿ ರೋಗ ಹರಡುವ ವೈರಾಣುಗಳು ಹಾಗೂ ಮಾರಕ ಪದಾರ್ಥಗಳಿವೆಯೆಂದು ಹರಿದಾಡುತ್ತಿರುವ ಶಂಕಿತ ಸುದ್ದಿಯ ಹಿಂದಿನ ಸತ್ಯ ಸಂಗತಿಗಳು:

ಕಳೆದ ಕೆಲವು ದಿನಗಳಿಂದ ದಿನಪತ್ರಿಕೆಗಳಲ್ಲಿ ʻಚೀನಾದ ಬೀಜ ಭಯೋತ್ಪಾದನೆʼ, ʻಚೀನಾದಿಂದ ವೈರಾಣು ಹರಡುವ ಶಂಕೆʼ, ʻಬಿತ್ತನೆ ಬೀಜದ ಪ್ಯಾಕೆಟ್‌ ಮನೆ ಬಾಗಿಲಿಗೆ : ಬೀಜ ಖರೀದಿಸದೆ ದೂರು ನೀಡಿ ʼ ಎಂಬ ಶೀರ್ಷಿಕೆಗಳಡಿಯಲ್ಲಿ ಸುದ್ದಿ ಪ್ರಕಟವಾಗಿದ್ದು ಇರುತ್ತದೆ. ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಯ ತುಣುಕುಗಳನ್ನು ಕೆಳಗೆ ನೀಡಲಾಗಿದೆ.

ಚೀನಾ ದೇಶದಿಂದ ಬಿತ್ತನೆ ಬೀಜದ ಪ್ಯಾಕೆಟ್‌ ಗಳಲ್ಲಿ ರೋಗ ಹರಡುವ ವೈರಾಣುಗಳು ಹಾಗೂ ಇನ್ನಿತರೆ ಮಾರಕ ಪದಾರ್ಥಗಳನ್ನು ಕಳುಹಿಸಲಾಗುತ್ತಿದೆ ಎಂಬ ಶಂಕಿತ ಸುದ್ದಿಯು ವಿಜಯವಾಣಿ ಪತ್ರಿಕೆ ಸೇರಿದಂತೆ ಹಲವು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಇರುತ್ತದೆ. ಅಲ್ಲದೆ ಬೀಜದಲ್ಲಿರುವ ಮಾರಕ ಪದಾರ್ಥಗಳಿಂದ ವ್ಯವಸಾಯ ಭೂಮಿ ಬಂಜರು ಆಗುವ ಸಾಧ್ಯತೆ ಇದೆಯೆಂಬ ಗಾಳಿಸುದ್ದಿ ರೈತರ ಹಾಗೂ ಕೃಷಿಕರ ವಲಯದಲ್ಲಿ ಹರಿದಾಡುತ್ತಿದ್ದು ಇದರಿಂದ ಭಯ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

ಇದುವರೆಗೂ ಚೀನಾ ದೇಶದಿಂದ ರಾಜ್ಯಕ್ಕೆ ಯಾವುದೇ ಬಿತ್ತನೆ ಬೀಜಗಳು ಬಂದಿರುವುದಿಲ್ಲ ಹಾಗೂ ಬಿತ್ತನೆ ಬೀಜಗಳಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಆದ್ದರಿಂದ ರೈತರು ಯಾವುದೇ ಊಹಾಪೋಹಗಳಿಗೆ ಹಾಗೂ ಗಾಳಿಸುದ್ದಿಗೆ ಕಿವಿಗೊಡಬಾರದೆಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿರುತ್ತಾರೆ.

ಈ ಸಂಬಂಧವಾಗಿ ಯಾದಗಿರಿ ಜಿಲ್ಲೆಯ ಕೃಷಿ ಅಧಿಕಾರಿಣಿಯಾದ ಶ್ರೀಮತಿ. ದೇವಿಕಾ ಆರ್‌, ಜಂಟಿ ಕೃಷಿ ನಿರ್ದೇಶಕಿ ರವರು ʻರೈತರು ಯಾರೂ ಅನಾಮಧೇಯ ಅಥವಾ ಲೇಬಲ್‌ ಇಲ್ಲದ ಬೀಜಗಳನ್ನು ಖರೀದಿಸಬಾರದುಒಂದು ವೇಳೆ ಆ ರೀತಿ ಬೀಜಗಳು ರೈತರಿಗೆ ಕಂಡುಬಂದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು, ಎಂದು ಪಬ್ಲಿಕ್‌ ಟಿವಿ ವರದಿಗಾರರಿಗೆ ಮತ್ತು ವಿಜಯ ಕರ್ನಾಟಕ ಪತ್ರಿಕೆಗೆ ಮಾಹಿತಿ ನೀಡಿದ್ದು ಇರುತ್ತದೆ.

Be the first to comment

Leave a Reply

Your email address will not be published.


*