ಕಲಬುರ್ಗಿಯ GIMS ಜಿಲ್ಲಾ ಆಸ್ಪತ್ರೆಯಲ್ಲಿ ಮೂರು ವರ್ಷದ ಮಗು ಕುಮಾರಿ ಭಾರತಿ ನಿಧನದ ಬಗ್ಗೆ ನಿಜವಾದ ಸಂಗತಿಗಳು.

ಕರ್ನಾಟಕ ರಾಜ್ಯದ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನಲ್ಲಿ ಒಂದು ಮೂರು ವರ್ಷದ ಬಾಲಕಿಯ ಮರಣವು ಪೊಲೀಸ್ ಲಾಕಪ್ ನಲ್ಲಿ ಆಗಿದೆ ಎಂಬ ಈ ಸುದ್ದಿಯು ದಿನಪತ್ರಿಕೆ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು ಪೊಲೀಸರು ಮಗುವಿನ ಮೇಲೆ ಹಲ್ಲೆಗೈದಿದ್ದಾರೆಂಬ ಎಂಬ ಆರೋಪಗಳೂ ಸಹ ಹಲವಾರು ಕಡೆಗಳಲ್ಲಿ ಕೇಳಿಬಂದಿದೆ. ಈ ಸಾವಿನ ಕಾರಣದಿಂದ ಗ್ರಾಮಸ್ಥರುಗಳ ಧಿಡೀರ್ ಪ್ರತಿಭಟನೆಗೆಗೂ ಕಾರಣವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬಗೆಹರಿಸಲಾಯಿತು ಸ್ಥಳೀಯ ಅಧಿಕಾರಿಗಳಿಂದ ಪರಿಶೀಲಿಸಿದ ಸತ್ಯ ಸಂಗತಿಗಳು ಈ ಕೆಳಕಂಡಂತಿವೆ;

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ದಿನಾಂಕ 27-12-2020ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯಿತು. ರಾಜು ತಲ್ವಾರ್ ಮತ್ತು ಸಂತೋಷ್ ತಲ್ವಾರ್ ಇಬ್ಬರೂ ಒಂದೇ ಹಳ್ಳಿಗೆ ಸೇರಿದವರಾಗಿದ್ದು, ಚುನಾವಣೆಗೆ ಸ್ಪರ್ದಿಸಿದ್ದರು. ಚುನಾವಣಾ ಫಲಿತಾಂಶವನ್ನು ದಿನಾಂಕ 30-12-2020ರಂದು ಘೋಷಿಸಲಾಯಿತು ಮತ್ತು ಫಲಿತಾಂಶದ ನಂತರ ರಾಜು ತಲ್ವಾರ್ ಚುನಾವಣೆಯಲ್ಲಿ ಆಯ್ಕೆಯಾದರು.

ಚುನಾವಣಾ ಫಲಿತಾಂಶದ ನಂತರ, ಚುನಾವಣೆಯಲ್ಲಿ ಸೋತ ಅಭ್ಯರ್ಥಿ ಸಂತೋಷ್ ತಲ್ವಾರ್ ಮತ್ತು ಇತರ ಮಹಿಳೆಯರು ಸೇರಿದಂತೆ 21 ಸದಸ್ಯರು ತಮ್ಮ ಎದುರಾಳಿಗಳ ಮನೆಗೆ ಹೋಗಿ ಜಗಳವಾಡಿದರು. ಇದು ದೈಹಿಕ ಹಿಂಸಾಚಾರಕ್ಕೆ ಕಾರಣವಾಯಿತು, ಇದರಲ್ಲಿ 10 ಸದಸ್ಯರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ, ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ತನಿಖೆಯನ್ನು ಕೈಗೊಂಡಾಗ ತಿಳಿದು ಬಂದ ವಿಷಯಗಳೇನೆಂದರೆ.

  • ಘಟನೆಯಲ್ಲಿ ಒಟ್ಟು 10 ಜನರು ಗಾಯಗೊಂಡಿದ್ದಾರೆ.
  • ಮೂರು ವ್ಯಕ್ತಿಗಳಿಗೆ ಗಂಭೀರವಾದ ಗಾಯಗಳಾಗಿದ್ದು, ಒಬ್ಬ ವ್ಯಕ್ತಿಯು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾನೆ ಮತ್ತು ಅವನ ಸ್ಥಿತಿ ಬಹಳ ಗಂಭೀರವಾಗಿದ್ದು ಪ್ರಜ್ಞಾಹೀನನಾಗಿರುತ್ತಾನೆ.

ಗಾಯಾಳುಗಳ ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ಪೊಲೀಸರು ಮೂವರು ಮಹಿಳೆಯರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿ ಅವರನ್ನು ತಕ್ಷಣ ನ್ಯಾಯಾಂಗ ಬಂಧನಕ್ಕೆ ಕೇಂದ್ರ ಕಾರಾಗೃಹ ಕಲ್ಬುರ್ಗಿಗೆ ಕಳುಹಿಸಲಾಗಿದೆ. ಆರೋಪಿಗಳಲ್ಲಿ ಇಬ್ಬರು ಮಹಿಳೆಯರು ಸಣ್ಣ ಮಕ್ಕಳನ್ನು ಹೊಂದಿದ್ದು ಅವರ ಒತ್ತಾಯದಂತೆ ಜೈಲು ಅಧಿಕಾರಿಗಳು ಮಕ್ಕಳನ್ನು ತಾಯಿಯವರೊಂದಿಗೆ ಇರಲು ಅನುಮತಿಸಿರುತ್ತಾರೆ.

ದಿನಾಂಕ 01-01-2021 ರ ಬೆಳಿಗ್ಗೆ, ಅದರಲ್ಲಿ ಒಂದು ಮಗು ಅನಾರೋಗ್ಯದಿಂದ ಇರುವುದನ್ನು ಗಮನಿಸಿ ಜೈಲಿನ ವೈದ್ಯರ ಶಿಫಾರಸಿನ ಮೇರೆಗೆ GIMS ಆಸ್ಪತ್ರೆ ಕಲಬುರಗಿಗೆ ಕಳುಹಿಸಲಾಗಿದೆ. ಅಲ್ಲಿ ಮಗುವು ಹೈಡ್ರೋಸೆಫಾಲಸ್ ಖಾಯಿಲೆಯಿಂದ ಬಳಲುತ್ತಿರುವುದು ಹಾಗೂ ಈ ಮೊದಲೇ ಶಸ್ತ್ರಚಿಕಿತ್ಸೆಗೆ ಸಹ ಒಳಗಾಗಿತ್ತೆಂದು ತಿಳಿದು ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾಗ ಮಗು 02-01-2021 ರಂದು ಆಸ್ಪತ್ರೆಯಲ್ಲಿಯೇ ನಿಧನವಾಗಿರುತ್ತದೆ.

ನಂತರ ಕಲಬುರ್ಗಿಯ ಫರ್ಹತಾಬಾದ್ ಪೊಲೀಸ್ ಠಾಣೆಯಲ್ಲಿ ಮಗುವಿನ ಸಾವಿನ ನಿಜ ಕಾರಣವನ್ನು ತಿಳಿಯಲು ಯುಡಿಆರ್ ಪ್ರಕರಣ ದಾಖಲಿಸಿ, ನ್ಯಾಯಾಧೀಶರ ಸಮ್ಮುಖದಲ್ಲಿ ಶವ ಪಂಚನಾಮೆ ಮತ್ತು ಫೋರೆನ್ಸಿಕ್ ಮೆಡಿಸಿನ್ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಫೋರೆನ್ಸಿಕ್ ಮೆಡಿಸಿನ್ ತಜ್ಞರು ತಾತ್ಕಾಲಿಕ ಮರಣೋತ್ತರ ವರದಿಯನ್ನು ನೀಡಿ, ಸಾವಿಗೆ ಕಾರಣವೆಂದರೆ “MENINGITIS AND HYDROCEPHALOUS with VP SHUNT IN SITU” ಮತ್ತು ದೇಹಕ್ಕೆ ಒಂದು ಹಳೆಯ ಶಸ್ತ್ರಚಿಕಿತ್ಸೆಯ ಗಾಯವನ್ನು ಹೊರತುಪಡಿಸಿ ಯಾವುದೇ ಬೇರೆ ಗಾಯಗಳು ಕಂಡು ಬಂದಿರುವುದಿಲ್ಲ ಎಂದು ಧೃಡೀಕರಿಸಿರುತ್ತಾರೆ.

Be the first to comment

Leave a Reply

Your email address will not be published.


*