ಕರ್ನಾಟಕ ವಿಧಾನಪರಿಷತ್ತು ಚುಕ್ಕೆಗುರುತಿಲ್ಲದ ಪ್ರಶ್ನೆಸಂಖ್ಯೆ 1474ಕ್ಕೆ ಗೃಹ ಸಚಿವರು ನೀಡಿರುವ ಉತ್ತರದ ಬಗ್ಗೆ: ಸತ್ಯ ಸಂಗತಿಗಳು

ಕರ್ನಾಟಕ ವಿಧಾನ ಪರಿಷತ್ತು ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 1474ಕ್ಕೆ ಮಾನ್ಯ ಗೃಹಸಚಿವರಿಂದ 545 ಪಿ.ಎಸ್.ಐ ನೇಮಕಾತಿಗೆ ಸಂಬಂದಿಸಿದಂತೆ ನೀಡಿರುವ ಉತ್ತರದ ಪ್ರತಿಯನ್ನು ತಿರುಚಿ ಈ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬಂತೆ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಕಂಡುಬಂದಿರುತ್ತದೆ.

ಅದರ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ. .

ಈ ವಿಷಯವನ್ನು ಪರಿಶೀಲಿಸಲಾಗಿ, ಈ ಮೇಲೆ ನೀಡಲಾದ ಎಡಿಟ್‌ ಮಾಡಲಾದ ಪ್ರತಿಯು ಸತ್ಯಕ್ಕೆ ದೂರವಾದುದು ಮತ್ತು ದುರುದ್ದೇಶ ಪೂರಕವಾದುದಾಗಿ ಕಂಡು ಬರುತ್ತದೆ

ಕರ್ನಾಟಕ ಸರ್ಕಾರದ ಅಧಿಕೃತ ಪ್ರತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ ಕ್ರ.ಸಂಖ್ಯೆ 59ರಲ್ಲಿ ಗಮನಿಸಬಹುದಾಗಿದೆ https://www.kla.kar.nic.in/council/Replies/unstarred/10032022/10032022usq.htm

ವಿಧಾನ ಪರಿಷತ್ತಿನ ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 1474 ಉತ್ತರ ಪ್ರತಿಯನ್ನು ಕಿಡಿಗೇಡಿಗಳು ಎಡಿಟ್ ಮಾಡಿದ್ದು ಸ್ಪರ್ಧಾರ್ಥಿಗಳಿಗೆ ಸುಳ್ಳು ಸುದ್ದಿಯನ್ನು ಹಬ್ಬಿಸಲು ಹಾಗೂ ಉದ್ಯೋಗಾಕಾಂಕ್ಷಿಗಳಲ್ಲಿ ನೈತಿಕತೆಯನ್ನು ಕುಂದಿಸಲು ಪ್ರಯತ್ನಿಸುತ್ತಿರುವುದು ಗಮನಿಸಲಾಗಿದೆ. ಈ ರೀತಿಯಾಗಿ ಕಾನೂನು ಬಾಹಿರ ಚಟುವಟಿಕೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡುತ್ತಾ, ಸ್ಪರ್ಧಾರ್ಥಿಗಳು ಸುಳ್ಳು ಸುದ್ದಿಗಳಿಗೆ ಎಡೆ ಮಾಡಿಕೊಡದೆ ಸತತ ಪರಿಶ್ರಮ ಮತ್ತು ಅಭ್ಯಾಸದಿಂದ ಪೊಲೀಸ್ ಇಲಾಖೆಯಲ್ಲಿ ನೌಕರಿಯನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ ಈ ರೀತಿ ಸುಳ್ಳು ಸುದ್ದಿ ಹರಡುವವರ ಮಾಹಿತಿ ಯಾರಿಗಾದರೂ ಲಭ್ಯವಾದಲ್ಲಿ ಈ ಕೆಳಗಿನ ನಂಬರನ್ನು ಸಂಪರ್ಕಿಸುವುದು. ಮಾಹಿತಿ ನೀಡುವವರ ವಿವರವನ್ನು ಗೌಪ್ಯವಾಗಿಡಲಾಗುವುದು ಮೊ. 9449878805

ಕರ್ನಾಟಕ ವಿಧಾನ ಪರಿಷತ್ತು ಚುಕ್ಕೆಗುರುತಿಲ್ಲದ ಪ್ರಶ್ನೆ ಸಂಖ್ಯೆ 1474ಕ್ಕೆ ಮಾನ್ಯ ಗೃಹಸಚಿವರಿಂದ 545 ಪಿ.ಎಸ್.ಐ ನೇಮಕಾತಿಗೆ ಸಂಬಂದಿಸಿದಂತೆ ನೀಡಿರುವ ಉತ್ತರ ನೈಜ ಪ್ರತಿಯನ್ನು ಈ ಕೆಳಗೆ ನೀಡಲಾಗಿದೆ. ಹಾಗೂ ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಕೂಡ ಈ ಪ್ರತಿಯನ್ನು ಸಾರ್ವಜನಿಕರು ನೋಡಬಹುದಾಗಿದೆ.

ತೀರ್ಮಾನ:
ವಾಸ್ತವವಾಗಿ ಪರಿಶೀಲಿಸಿದಾಗ, ಪ್ರಸಾರಗೊಂಡಿರುವ ಪ್ರತಿಯು ಅಧಿಕೃತವಾದುದು ಅಲ್ಲ. ಅದನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ. ಈ ಮೇಲೆ ನೀಡಿರುವ ಲಿಂಕ್ನಲ್ಲಿ ಕ್ರಮ ಸಂಖ್ಯೆ 59ರಲ್ಲಿ ಮಾನ್ಯ ಗೃಹಸಚಿವರು ವಿಧಾನಪರಿಷತ್ತಿಗೆ ನೀಡಿರುವ ಮೂಲ ಉತ್ತರದ ಪ್ರತಿಯನ್ನು ಗಮನಿಸಬಹುದಾಗಿದೆ.

ಸಾರ್ವಜನಿಕರು ಸಂಬಂಧಿತ ಅಧಿಕಾರಿಗಳೊಂದಿಗೆ ಸರಿಯಾದ ದೃಡೀಕರಣವಿಲ್ಲದ ಇಂತಹ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳದಂತೆ ಈ ಮೂಲಕ ವಿನಂತಿಸಲಾಗಿದೆ.

Be the first to comment

Leave a Reply

Your email address will not be published.


*