ಕರ್ನಾಟಕ ರಾಜ್ಯದ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರನ್ನು ಹತ್ಯೆ ಮಾಡಲಾಗಿದೆ ಎಂಬ ವಿಡಿಯೋದ ಬಗ್ಗೆ : ನಿಜವಾದ ಸಂಗತಿಗಳು

ವೀಡಿಯೊದ ಸ್ಕ್ರೀನ್ ಶಾಟ್‌ಗಳು

ನ್ಯೂಸ್ ಫಸ್ಟ್ ಕನ್ನಡ ನ್ಯೂಸ್ ಚಾನೆಲ್ ಕಾರ್ಯಕ್ರಮದಲ್ಲಿ ಪ್ರಸಾರವಾದ ವಿಡಿಯೋ ತುಣುಕನ್ನು ಬಳಸಿಕೊಂಡು ಆಸ್ಪತ್ರೆಯಲ್ಲಿ ಹಣಕ್ಕಾಗಿ ಕೋವಿಡ್ ಸೋಂಕಿತರನ್ನು ಕೊಲ್ಲಲಾಗುತ್ತಿದೆ ಎಂದು ಆರೋಪ ಹೊರಿಸಲಾಗಿದೆ, ಇದನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಶೇರ್ ಮಾಡಲಾಗುತ್ತಿರುವುದನ್ನು ಗಮನಿಸಲಾಗಿದೆ. ಅಲ್ಲದೆ ಈ ಘಟನೆ ಕರ್ನಾಟಕ ರಾಜ್ಯದ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ. ವಾಸ್ತವವಾಗಿ ಪರಿಶೀಲಿಸಿದಾಗ, ವೀಡಿಯೊವು ಸಂಪೂರ್ಣವಾಗಿ ನಕಲಿ ಮತ್ತು ಒಂದೇ ಕ್ಲಿಪ್‌ನಲ್ಲಿ ವಿಭಿನ್ನ ವೀಡಿಯೊಗಳೊಂದಿಗೆ ಎಡಿಟ್ ಮಾಡಲಾಗಿದೆ. ಈ ವೀಡಿಯೊ ಮೂಲದ ಬಗ್ಗೆ ಪರಿಶೀಲಿಸಿದಾಗ ಮಹಾನಾಯಕ_ಕನ್ನಡ ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಪ್ಲೋಡ್ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಪರಿಶೀಲಿಸಿದಾಗ. ಪುಟವು ಈಗಾಗಲೇ ಈ ವೀಡಿಯೊವನ್ನು ಅಳಿಸಿದೆ ಎಂದು ಗಮನಿಸಲಾಗಿದೆ, ಮತ್ತು ಖಾತೆ ನಿರ್ವಾಹಕರು ಈಗಾಗಲೇ ಕ್ಷಮೆಯಾಚಿಸಿದ್ದಾರೆ ಮತ್ತು ವೀಡಿಯೊದ ಬಗ್ಗೆ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಈ ವಿಡಿಯೋ ಎಡಿಟ್ ಮಾಡಿರುತ್ತಾರೆ.

ಕ್ಷಮೆಯಾಚಿಸುವ ಇನ್ಸ್ಟಾಗ್ರಾಮ್ ಖಾತೆಯ ನಿರ್ವಾಹಕರ ಸ್ಕ್ರೀನ್ ಶಾಟ್‌ಗಳು ಇಲ್ಲಿವೆ

ನಕಲಿ ವೀಡಿಯೊ ತುಣುಕುಗಳ ಬಗ್ಗೆ ಸತ್ಯ ಸಂಗತಿಗಳೇನೆಂದರೆ

  1. ಅಪರಿಚಿತ ವ್ಯಕ್ತಿಯು ಆಸ್ಪತ್ರೆಯ ಹಾಸಿಗೆಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಲ್ಲುವ ವಿಡಿಯೋ ತುಣುಕು ಕೋವಿಡ್ನಿಂದ ಭಾದಿತ ರೋಗಿಯಲ್ಲ ಮತ್ತು ಕರ್ನಾಟಕ ರಾಜ್ಯಕ್ಕೂ ಸಂಬಂಧಿಸಿಲ್ಲ. ಇದು ಮೇ 19, 2020 ರಂದು ಬಾಂಗ್ಲಾದೇಶದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಹಳೆಯ ವಿಡಿಯೋದ ತುಣುಕಾಗಿರುತ್ತದೆ.
  2. ಎರಡನೆಯ ಕ್ಲಿಪ್ ಖಿನ್ನತೆಯಿಂದ ಬಳಲುತ್ತಿರುವ ರೋಗಿಯನ್ನು ನಿಯಂತ್ರಿಸಲು ಪಟಿಯಾಲದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯು ನಡೆಸಿದ ಹಲ್ಲೆಯದ್ದಾಗಿದ್ದು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ನಂತರ ಕ್ರಮ ಕೈಗೊಂಡಿರುತ್ತಾರೆ. ಇದೂ ಕೂಡ ಕೋವಿಡ್ ನಿಂದ ಭಾದಿತ ವ್ಯಕ್ತಿಗೆ ಸಂಬಂಧಿಸಿರುವುದಿಲ್ಲ.

ಆದ್ದರಿಂದ ಇದು ಜನರಲ್ಲಿ ಭಯ ಮತ್ತು ಭೀತಿಯನ್ನು ಉಂಟುಮಾಡುವ ದುರುದ್ದೇಶಪೂರಿತ ಉದ್ದೇಶದಿಂದ ಪ್ರಸಾರವಾಗುತ್ತಿರುವ ನಕಲಿ ವಿಡಿಯೋ ಆಗಿದ್ದು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಸದರಿ ವಿಡಿಯೋ ಶೇರ್ ಮಾಡುವುದನ್ನು ಸಾರ್ವಜನಿಕರು ನಿಲ್ಲಿಸಬೇಕಿದೆ.

1 Comment

Leave a Reply

Your email address will not be published.


*