ಕರ್ನಾಟಕ ಪೋಲಿಸರ ಹಲ್ಲೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆದ ಬಗ್ಗೆ: ನಿಜ ಸಂಗತಿಗಳು

ಕರ್ನಾಟಕದ ಪ್ರಸ್ತುತ ಲಾಕ್‌ಡೌನ್ ಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ ಮೂಲಕ ಪೊಲೀಸರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ತುಣುಕನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೊದಲ್ಲಿ ಪದ್ಮಾ ಹರೀಶ್ (ಅಪರಿಚಿತ) ಎಂದು ಕರೆದುಕೊಳ್ಳುವ ಮಹಿಳೆಯು ರಾಜ್ಯ ಪೋಲಿಸ್ ಪಡೆಯನ್ನು ಅವಾಚ್ಯ ಶಬ್ದಗಳಿಂದ ದೂಷಿಸಿ ಮತ್ತು ಪೊಲೀಸರ ಮೇಲೆ ಸಾರ್ವಜನಿಕರು ಪ್ರತೀಕಾರ ಮತ್ತು ಹಲ್ಲೆಯನ್ನು ನಡೆಸಲು ಪ್ರೇರೇಪಿಸಿರುತ್ತಾರೆ.

ವಿಡಿಯೊದ ಸ್ಕ್ರೀನ್‌ಶಾಟ್‌ಗಳು

ವಿವರವಾದ ಪರಿಶೀಲನೆಯಲ್ಲಿ ಈ ವೀಡಿಯೊ ಕಳೆದ ವರ್ಷ ಮಹಾರಾಷ್ಟ್ರದ ಮುಂಬೈ ಸಮೀಪದ ಮುಂಬ್ರಾದಲ್ಲಿ ಸಂಭವಿಸಿದ ಘಟನೆ ಮತ್ತು ಇದು ಕರ್ನಾಟಕ ಪೊಲೀಸರಿಗಾಗಲೀ ಅಥವಾ ಕರ್ನಾಟಕದ ಪ್ರಸ್ತುತ ಲಾಕ್‌ಡೌನ್‌ಗಾಗಲೀ ಸಂಬಂಧಿಸಿಲ್ಲ ಎಂದು ತಿಳಿದುಬಂದಿದೆ.

ಏಪ್ರಿಲ್ 3, 2020ರ ವಿಡಿಯೋ ಮಹಾರಾಷ್ಟ್ರದ ಮುಂಬೈನ ವಾಸೈನಲ್ಲಿ ನಡೆದ ಹಿಂದಿನ ಘಟನೆಗೆ ಸಂಭದಿಸಿದ್ದಾಗಿರುತ್ತದೆ. ಮುಂಬೈ ಮಿರರ್ ಈ ಘಟನೆಯನ್ನು ವಿವರವಾಗಿ ವರದಿ ಮಾಡಿದ್ದು ಆ ವರದಿಯ ವಿವರಗಳನ್ನು ಇಲ್ಲಿ ನೋಡಬಹುದಾಗಿದೆ.

bit.ly/2R2Hh8r

TOI Plus ನ ಟ್ವೀಟ್ ಲಿಂಕ್‌:
https://twitter.com/TOIPlus/status/1246050699869179908


ವೀಡಿಯೊ ಬೇರೆ ಕೋನದಲ್ಲಿ ಚಿತ್ರೀಕರಿಸಲಾಗಿರುವುದನ್ನು ಇಲ್ಲಿ ನೋಡಬಹುದಾಗಿದೆ.
https://twitter.com/i/status/1246050699869179908

ಇದರ ಮೂಲ ವೀಡಿಯೊವನ್ನು ಒಂದೇ ದಿನಾಂಕದಲ್ಲಿ (13 ಏಪ್ರಿಲ್ 2020) ಎರಡು ವಿಭಿನ್ನ ಫೇಸ್‌ಬುಕ್ ಪುಟಗಳಲ್ಲಿ ಪೋಸ್ಟ್ ಮಾಡಲಾಗಿದೆ.

ಸ್ಕ್ರೀನ್‌ಶಾಟ್‌ಗಳು ಮತ್ತು ಲಿಂಕ್‌ಗಳು ಈ ಕೆಳಗಿನಂತಿವೆ:

ತೀರ್ಮಾನ:-
ಈ ವೀಡಿಯೊ ಕರ್ನಾಟಕ ರಾಜ್ಯ ಪೊಲೀಸರಿಗಾಗಲೀ ಅಥವಾ ಕರ್ನಾಟಕ ರಾಜ್ಯದಲ್ಲಿ ವಿಧಿಸಲಾಗಿರುವ ಪ್ರಸ್ತುತ ಕೋವಿಡ್ ಲಾಕ್‌ಡೌನ್‌ಗಾಗಲೀ ಯಾವುದೇ ರೀತಿಯಲ್ಲಿ ಸಂಬಂಧಿಸಿರುವುದಿಲ್ಲ. ಕರ್ನಾಟಕ ರಾಜ್ಯ ಪೊಲೀಸರನ್ನು ಗುರಿಯಾಗಿಸಿಕೊಂಡು ಪೊಲೀಸರನ್ನು ಅವಮಾನಿಸುವ ಮತ್ತು ನಿಸ್ತೇಜರನ್ನಾಗಿಸಲು, ಹಾಗೂ ಜನರನ್ನು ದಾರಿತಪ್ಪಿಸುವ ದುರುದ್ದೇಶಪೂರಿತ ಧ್ಯೇಯದಿಂದ ಸ್ವಯಂ ಘೋಷಿತ ಪದ್ಮಾಹರೀಶ್ ಎಂಬ ಮಹಿಳೆಯು ಕನ್ನಡ ವಾಯ್ಸ್ ಓವರ್ ಬಳಸಿ ರಚಿಸಿದ ನಕಲಿ ವಿಡಿಯೋ ಎಂದು ತಿಳಿದುಬಂದಿದೆ.

ಪೊಲೀಸರ ವಿರುದ್ಧ ಕೆಟ್ಟ ಅಭಿಪ್ರಾಯ ಮೂಡಿಸಲು ಮತ್ತು ಸುಳ್ಳು ನಿರೂಪಣೆಯ ಆಧಾರದ ಮೇಲೆ ಸಾರ್ವಜನಿಕರನ್ನು ಪೋಲೀಸರ ಮೇಲೆ ಆಕ್ರಮಣ ಮಾಡಲು ಪ್ರೇರೇಪಿಸಿದ್ದಕ್ಕಾಗಿ ಕರ್ನಾಟಕ ಪೊಲೀಸರು ಪದ್ಮಾ ಹರೀಶ್ ಎಂಬ ಈ ಮಹಿಳೆಯ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಆಲೋಚಿಸುತ್ತಿದ್ದಾರೆ.

ಆದ್ದರಿಂದ ಕರೋನಾ ಮತ್ತು ಪೊಲೀಸ್ ಇಲಾಖೆ ಹಾಗೂ ಇದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ದೃಡೀಕರಿಸದ ಅನಧಿಕೃತ ವೀಡಿಯೊಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸರಿಯಾಗಿ ಪರಿಶೀಲಿಸದೆ ಸಾರ್ವಜನಿಕರು ಹಂಚಿಕೊಳ್ಳದಂತೆ ಈ ಮೂಲಕ ಕೋರಲಾಗಿದೆ.

Be the first to comment

Leave a Reply

Your email address will not be published.


*