ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಸಿಖ್ ಹುಡುಗಿಯೊಬ್ಬಳಿಗೆ ತನ್ನ ಪೇಟವನ್ನು ತೆಗೆಯುವಂತೆ ಕೇಳಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದಂತಹ ಹಲವಾರು ಪೋಸ್ಟ್ಗಳು ಕಂಡುಬಂದಿವೆ. ಅಂತಹ ಕೆಲವು ಪೋಸ್ಟ್ಗಳನ್ನು ಕೆಳಗೆ ನೀಡಲಾಗಿದೆ:




Link to the above article: https://prasthutha.com/bangalore-mcc-college-forced-to-remove-turban-for-sikh-student/
ಈ ಬಗ್ಗೆ ಪರಿಶೀಲಿಸಿದಾಗ, ಮೇಲ್ಕಂಡ ಆರೋಪವು ಸಂಪೂರ್ಣ ನಿಜವಲ್ಲ ಎಂದು ತಿಳಿದುಬಂದಿದೆ. ಶಾಲಾ ಪ್ರಾಧಿಕಾರ, ವಿದ್ಯಾರ್ಥಿನಿಯ ತಂದೆ, ಹಾಗೂ ಕರ್ನಾಟಕ ರಾಜ್ಯದ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರು ಈ ಕುರಿತು ಸ್ಪಷ್ಠಿಕರಣ ನೀಡಿರುತ್ತಾರೆ. ಸ್ಪಷ್ಠಿಕರಣಕ್ಕೆ ಸಂಬಂಧಿಸಿದ ಸುದ್ದಿಬರಹಗಳ ಸ್ಕ್ರೀನ್ಶಾಟ್ಗಳು ಮತ್ತು ಆ ಲೇಖನಗಳ ಲಿಂಕ್ಗಳನ್ನು ಕೆಳಗೆ ನೀಡಲಾಗಿದೆ: 1) https://www.deccanherald.com/state/top-karnataka-stories/hc-interim-order-not-applicable-on-turban-wearing-students-bc-nagesh-1084863.html 2) https://kannada.oneindia.com/news/karnataka/high-court-interim-order-on-hijab-not-applicable-on-turban-wearing-students-says-minister-bc-nagesh-248749.html



ಗುಂಪುಗಳ ನಡುವೆ ದ್ವೇಷಕ್ಕೆ ಕಾರಣವಾಗುವ ಇಂತಹ ಪರಿಶೀಲನೆಗೊಳಪಡಿಸದ / ಅನುಮಾನಾಸ್ಪದ ಮಾಹಿತಿಗೆ ಬಲಿಯಾಗದಂತೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವಿಷಯಗಳನ್ನು ಹಂಚಿಕೊಳ್ಳಬಾರದೆಂದು ಸಾರ್ವಜನಿಕರಿಗೆ ತಿಳಿಯಪಡಿಸಲಾಗಿದೆ.
Leave a Reply